ಮೊಬೈಲ್ ನಲ್ಲಿ ಸೆರೆ ಹಿಡಿದ ದೃಶ್ಯಾವಳಿಯು ಅಧಿಕೃತ ದಾಖಲೆ!

ಲಕ್ನೊ:-ಮೊಬೈಲ್ ಫೋನ್‌ಗಳಲ್ಲಿ ಸೆರೆ ಹಿಡಿಯಲಾದ ಚಿತ್ರಗಳು ಹಾಗೂ ವೀಡಿಯೋ ದೃಶ್ಯಾವಳಿಗಳನ್ನು ವಿಚಾರಣೆಗೆ ಪ್ರಾಥಮಿಕ ದಾಖಲೆಯನ್ನಾಗಿ ಪರಿಗಣಿಸುವ ವಿಚಾರವನ್ನು ತಿದ್ದುಪಡಿ ಮೂಲಕ ಕಾಯ್ದೆಗೆ ಸೇರ್ಪಡೆ ಮಾಡಲು ಉದ್ದೇಶಿಸಲಾಗಿದೆ. ಸಾಕ್ಷ್ಯಾಧಾರಗಳ ಕಾಯ್ದೆ-1872ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಉತ್ತರ ಪ್ರದೇಶದ ಸಹರಾನ್ ಪುರದಲ್ಲಿ ನಡೆದ ದಲಿತ ವಿರೋಧಿ ದೊಂಬಿಗಳು ಹಾಗೂ ರೋಹ್ಟಕ್‌ನಲ್ಲಿ ನಡೆದ ಜೌಟ್ ಗಲಭೆಗಳನ್ನು ನಿಯಂತ್ರಿಸುವಲ್ಲಿ ಭದ್ರತಾಪಡೆಗಳು ವಿಫಲವಾಗಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ, ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಚಿಂತನೆ ನಡೆಸಿದೆ.
ಕಾಯ್ದೆಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಉತ್ತರ ಪ್ರದೇಶ, ಹರ್ಯಾಣ, ಮಹಾರಾಷ್ಟ್ರ, ಜಮ್ಮು-ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಗಳ ಅಭಿಪ್ರಾಯ ತಿಳಿಸುವಂತೆ ಗೃಹ ಸಚಿವಾಲಯ ಸೂಚಿಸಿದೆ.
ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿಯಲಾದ ವೀಡಿಯೋ ದೃಶ್ಯಾವಳಿ, ಸಿಸಿಟಿವಿ ದೃಶ್ಯಗಳು ಅಥವಾ ಚಿತ್ರಗಳನ್ನು ಸಾಕ್ಷ್ಯಾಧಾರಗಳೆಂದು ಪರಿಗಣಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನು ಕಾಯ್ದೆ ವ್ಯಾಪ್ತಿಗೆ ಸೇರ್ಪಡೆ ಮಾಡಲು 1872ರ ಸಾಕ್ಷ್ಯಾಧಾರಗಳ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!