janadhvani

Kannada Online News Paper

ದುಬೈ: ಬಾಡಿಗೆದಾರರ ಭದ್ರತಾ ಠೇವಣೆಗಳನ್ನು ತಡೆಗಟ್ಟದಂತೆ ಮಾಲೀಕರಿಗೆ ಎಚ್ಚರಿಕೆ

ದುಬೈ: ದುಬೈಯಲ್ಲಿರುವ ಕಟ್ಟಡ ಮಾಲೀಕರು ತಮ್ಮ ಕಟ್ಟಡಗಳಲ್ಲಿನ ಬಾಡಿಗೆದಾರರಿಗೆ ಭದ್ರತಾ ಠೇವಣೆಗಳನ್ನು ಹಿಂದಿರುಗಿಸದ ಪ್ರಸಂಗಗಳು ಹೆಚ್ಚಾಗುತ್ತಿರುವುದಾಗಿ ವರದಿಯಾಗಿದೆ. ಇಲ್ಲ ಸಲ್ಲದ ನ್ಯಾಯಗಳ ನೆಪದಲ್ಲಿ ಮುಂಗಡ ಪಾವತಿಸಿದ ಮೊತ್ತವನ್ನು ನಿರಾಕರಿಸಲಾಗುತ್ತಿದೆ.

ಬಾಡಿಗೆ ಮಾಲೀಕರ ವಾರ್ಷಿಕ ಬಾಡಿಗೆಯ ಶೇಕಡಾ 5ರಷ್ಟು ಸೆಕ್ಯೂರಿಟಿ ಬಾಬ್ತಾಗಿ ಬಾಡಿಗೆದಾರರು ಮುಂಗಡವಾಗಿ ಪಾವತಿಸಬೇಕು. ಒಪ್ಪಂದ ಕೊನೆಗೊಳ್ಳುವಾಗ ಈ ಮೊತ್ತವನ್ನು ಹಿಂತಿರುಗಬೇಕೆಂದು ಕಾನೂನಿನಲ್ಲಿ ಉಲ್ಲೇಖವಿದೆ.

ಆದರೆ ಈ ಮೊತ್ತವು ಹಲವರಿಗೆ ಲಭಿಸುತ್ತಿಲ್ಲ. ಮುನ್ನೆಚ್ಚರಿಕೆಯಿಲ್ಲದೆ ಕಟ್ಟಡವನ್ನು ತೊರೆಯುವುದು ಮತ್ತು ಕಟ್ಟಡಕ್ಕೆ ಹಾನಿ ಉಂಟುಮಾಡಿರುವುದಾಗಿ ಕಾರಣಗಳನ್ನು ನೀಡಿ ಠೇವಣಿ ನಿರಾಕರಿಸಲಾಗುತ್ತದೆ. ರಿಯಲ್ ಎಸ್ಟೇಟ್ ಕಂಪನಿಗಳೊಂದಿಗೆ ತರ್ಕ ಉಂಟಾದರೂ, ಅನೇಕರು ಅಧಿಕಾರಿಗಳಿಗೆ ದೂರು ನೀಡುವುದಿಲ್ಲ ಎನ್ನಲಾಗಿದೆ.

ನಿವಾಸಕ್ಕೆ ಹಾನಿಯುಂಟಾದರೆ ದೊಡ್ಡ ಮಟ್ಟದ ಮೊತ್ತವನ್ನು ವಿಧಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಪರಿಹಾರವನ್ನು ನಿರ್ಧರಿಸಲು ಯಾವುದೇ ನಿರ್ದಿಷ್ಟ ಮಾನದಂಡಗಳಿಲ್ಲ. ನಿವಾಸ ಒಪ್ಪಂದ ಮಾಡುವಾಗ ಸರಿಯಾಗಿ ಓದಿದ ಬಳಿಕವೇ ಸಹಿ ಹಾಕುವಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಭದ್ರತಾ ಠೇವಣೆಗಳನ್ನು ಅನಗತ್ಯವಾಗಿ ತಡೆಯದಂತೆ ಕಟ್ಟಡ ಮಾಲೀಕರನ್ನು ಮುನ್ಸಿಪಲ್ ಅಧಿಕಾರಿಗಳು ಎಚ್ಚರಿಸಿದ್ದಾರೆ. ಅನಗತ್ಯವಾಗಿ ಭದ್ರತಾ ಠೇವಣಿ ತಡೆಗಟ್ಟಿದರೆ ಆ ಬಗ್ಗೆ ದೂರನ್ನು ಸಲ್ಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

error: Content is protected !! Not allowed copy content from janadhvani.com