ಸಂಸ್ಥಾನ ಜಂಇಯ್ಯತ್ತುಲ್ ಉಲಮಾ ಗೋಲ್ಡನ್ ಜುಬಿಲಿ ಸಮ್ಮೇಳನ ಸಮಾಪ್ತಿ

ಎರ್ನಾಕುಲಂ:ಕೇರಳದ ಮೂರು ಪ್ರಾಂತ್ಯಗಳಲ್ಲಿ ಸಂಘಟಿಸಲ್ಪಟ್ಟ ಸಮಾವೇಶಗಳ ಕೊನೆಯ ಹಂತವಾಗಿ ದಕ್ಷಿಣ ಪ್ರಾಂತ್ಯ ಸಮ್ಮೇಳನ ಜನವರಿ 18 ಗುರುವಾರ ಎರ್ನಾಕುಲಂ ಜಿಲ್ಲೆಯ ಆಲುವ ದಲ್ಲಿ ನಡೆಯಿತು.
ಜಂ-ಇಯ್ಯತ್ತಿನ ಗೌರವಾನ್ವಿತ ಅಧ್ಯಕ್ಷರಾಗಿರುವ ಶೈಖುಲ್ ಉಲಮ ಎನ್.ಕೆ.ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ಪಾಣಕಾಡ್ ಅಬ್ದುಲ್ ಜಬ್ಬಾರ್ ಶಿಹಾಬ್ ತಂಗಳ ಉದ್ಘಾಟಿಸಿದರು. ಮೌಲಾನಾ ಅಹಮದ್ ಬಾಖವಿ ಅರೂರ್, ಮೌಲಾನಾ ಬೀರಾನ್ ಕುಟ್ಟಿ ಹಝರತ್, ಪುನ್ನುರುನ್ನಿ ಕುಞ ಮಹಮದ್‌ ಮೌಲವಿ ಮುಂತಾದ ಘನ ವಿದ್ವಾಂಸರ ಭಾಷಣದ ಬಳಿಕ ಜಂ-ಇಯ್ಯತ್ತಿನ ಪ್ರಧಾನ ಕಾರ್ಯದಶಿ೯ ಮೌಲಾನಾ ನಜೀಬ್ ಉಸ್ತಾದ್ ಮುಖ್ಯ ಭಾಷಣ ನಿರ್ವಹಿಸಿದರು.
1967ರಲ್ಲಿ ಮೌಲಾನಾ ತಾಝಕೋಡ್ ಕುಞಲವಿ ಮುಸ್ಲಿಯಾರ್ ಅಧ್ಯಕ್ಷರೂ, ತಾಜುಲ್ ಉಲಮ ಕೆ.ಕೆ.ಸ್ವದಖತುಲ್ಲ ಮೌಲವಿ ಪ್ರಧಾನ ಕಾರ್ಯದರ್ಶಿಯಾಗಿಯೂ ಸಯದ್ ಯಾಸೀನ್ ಮುತ್ತುಕೋಯ ತಂಙಳ್ ಕೋಶಾಧಿಕಾರಿಯಾಗಿಯೂ ರೂಪೀಕೃತವಾದ ಸಂಸ್ಥಾನ ಜಂ-ಇಯ್ಯತ್ತುಲ್ ಉಲಮ ಸುವಣ೯ ಮಹೋತ್ಸವದ ಭಾಗವಾಗಿ ಆಯೋಜಿಸಿದ್ದ ಕಾರ್ಯಕ್ರಮಗಳೆಲ್ಲವೂ ಯಶಸ್ವಿಯಾಗಿ ನಡೆಯಿತು.

Leave a Reply

Your email address will not be published. Required fields are marked *

error: Content is protected !!