SSFಪ್ರತಿಭೋತ್ಸವ ; ಅಭಿನಂದನಾ ಸಮಾರಂಭ

ಸುಳ್ಯ:ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧೀನದ ಮುತಅಲ್ಲಿಂ ದಅವಾ ಸಮಿತಿ ವತಿಯಿಂದ ಪ್ರತಿಭೋತ್ಸವ ಕಲಾ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮುತಅಲ್ಲಿಂ ದಅವಾ ಸಮಿತಿ ಸದಸ್ಯರಿಗೆ ಅಭಿನಂದನಾ ಸಮಾರಂಭವು ಜ.19 ರಂದು ಸುಳ್ಯ ಸುನ್ನಿ ಸೆಂಟರಿನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಅಧ್ಯಕ್ಷತೆಯಲ್ಲಿ ಎಸ್.ವೈ.ಎಸ್ ಪುತ್ತೂರು ಝೋನ್ ಕಾರ್ಯದರ್ಶಿ ಅಬ್ದುಲ್ ಹಮೀದ್ ಸುಣ್ಣಮೂಲೆ ಉದ್ಘಾಟಿಸಿದರು. ಸಯ್ಯಿದ್ ಅಬೂ ತ್ವಾಹಿರ್ ಸಅದಿ ತಂಙಳ್ ದುಆ ನೆರವೇರಿಸಿದರು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಫೈಝಲ್ ಝುಹ್ರಿ ಅಭಿನಂದನಾ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರತಿಭೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮುತಅಲ್ಲಿಂ ದಅವಾ ಸಮಿತಿ ಸದಸ್ಯರನ್ನು ಸನ್ಮಾನಿಸಲಾಯಿತು. ಗಾಂಧಿನಗರ ಕೇಂದ್ರ ಜುಮಾ ಮಸೀದಿ ಉಪಾಧ್ಯಕ್ಷರಾದ ಹಾಜಿ ಅಬ್ಬಾಸ್ ಕಟ್ಟೆಕಾರ್, ಅನ್ಸಾರ್ ಅಧ್ಯಕ್ಷರೂ ನಗರ ಪಂಚಾಯತ್ ಸದಸ್ಯರೂ ಆದ ಹಾಜಿ ಮುಸ್ತಫಾ ಜನತಾ, ಎಸ್.ವೈ.ಎಸ್ ಸುಳ್ಯ ಬ್ರಾಂಚ್ ಪ್ರ.ಕಾರ್ಯದರ್ಶಿ ರಫೀಕ್ ಚಾಯ್ಸ್, ಕೆ.ಸಿ.ಎಫ್ ನಾಯಕರಾದ ಮಜೀದ್ ಅರಂಬೂರು ಪ್ರತಿಭೆಗಳನ್ನು ಸನ್ಮಾನಿಸಿದರು. ಎಸ್.ವೈ.ಎಸ್ ಸುಳ್ಯ ಬ್ರಾಂಚ್ ಕೋಶಾಧಿಕಾರಿ ಸಿದ್ದೀಕ್ ಕಟ್ಟೆಕಾರ್, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಕಾರ್ಯದರ್ಶಿ ಅಬ್ಬಾಸ್ ಎ.ಬಿ ಉಪಸ್ಥಿತರಿದ್ದರು. ಮುತಅಲ್ಲಿಂ ದಅವಾ ಸಮಿತಿ ಪ್ರ.ಕಾರ್ಯದರ್ಶಿ ಮುಖ್ತಾರ್ ಮೇನಾಲ ಸ್ವಾಗತಿಸಿ, ಕಾರ್ಯದರ್ಶಿ ಸ್ವಾದಿಖ್ ಕುಂಭಕ್ಕೋಡ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!