ಸ್ವದೇಶೀಕರಣ: ಕುವೈಟ್ ನಲ್ಲಿ ಹೊಸ ಕಾನೂನು ಜಾರಿ

ಕುವೈಟ್ ಸಿಟಿ: ಸ್ವದೇಶೀಕರಣವನ್ನು ಕಾನೂನಾತ್ಮಕ ಗೊಳಿಸಲು ಸ್ವದೇಶೀಕರಣ ಎಂಪ್ಲಾಯ್ಮೆಂಟ್ ಉನ್ನತ ಮಟ್ಟದ ಕಾನೂನು ನಿರ್ಮಾಣಕ್ಕೆ ಮುಂದಾಗಿದೆ ಎಂದು ಸಂಸದ ಸಾಲೆ ಅಶೂರ್ ವ್ಯಕ್ತಪಡಿಸಿದ್ದಾರೆ.ಸ್ವದೇಶೀಕರಣಕ್ಕಾಗಿ ಸರಕಾರಿ ಮತ್ತು ಸರಕಾರೇತರ ಸ್ಥಾಪನೆಗಳಲ್ಲಿ 12,000 ಹೊಸ ಕೆಲಸಗಳನ್ನು ಕಂಡುಹಿಡಿಯಬೇಕಾಗಿದೆ.

ಸಂಸತ್ ಕಾನೂನು ನಿರ್ಮಾಣ ಸಮಿತಿ, ಕೇಂದ್ರ ಸಿವಿಲ್ ಸರ್ವೀಸ್ ಕಮೀಷನ್ ಫಾರ್ ಪಬ್ಲಿಕ್ ಅಥಾರಿಟಿ ಫಾರ್ ಮ್ಯಾನ್ ಪವರ್, ಪ್ಲ್ಯಾನಿಂಗ್ ಸುಪ್ರೀಂ ಕೌನ್ಸಿಲ್ ಅಧಿಕಾರಿಗಳು, ತೈಲ ಖಾತೆ ಸಚಿವರ ಸಾನಿಧ್ಯದಲ್ಲಿ ಈ ಬಗ್ಗೆ ಚರ್ಚೆ ನಡೆಸಿದೆ.
ಆರೋಗ್ಯ ಸಚಿವಾಲಯ, ತೈಲ ಖಾತೆ, ವಿದ್ಯಾಭ್ಯಾಸ ಮುಂತಾದ ವಲಯದಲ್ಲಿ ವಿದೇಶೀ ಸಾನಿಧ್ಯ ಅನಿವಾರ್ಯವಾಗಿದ್ದು, ಆ ಬಗ್ಗೆ ಗಮನ ಹರಿಸಬೇಕಿದೆ ಎನ್ನುವುದನ್ನು ಸಮಿತಿಯು ಬೆಟ್ಟು ಮಾಡಿದೆ ಎಂದು ಸಂಸದ ಸಾಲೆ ಆಶೂರ್ ತಿಳಿಸಿದರು.

ಅಪ್ರಖ್ಯಾಪಿತ ‘ನಿತಾಖಾತ್’ ಗೆ ಸಮಾನವಾಗಿ ಅತ್ಯಂತ ವೇಗವಾಗಿ ಸರಕಾರಿ ವಲಯದಲ್ಲಿ ಸ್ವದೇಶೀಕರಣವು ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!