ಕೆಲಸದ ಆಮಿಷವೊಡ್ಡಿ ಸಂದರ್ಶನ ವೀಸಾ ನೀಡುತ್ತಿರುವ ಏಜನ್ಸಿಗಳ ಬಗ್ಗೆ ಎಚ್ಚರ!

ಕಲ್ಲಿಕೋಟೆ(ಜನಧ್ವನಿ): ಗಲ್ಫ್ ವಲಯಕ್ಕೆ ಕೆಲಸದ ವಾಗ್ದಾನ ನೀಡಿ ಟೂರಿಸ್ಟ್ ವಿಸಾ ಇಲ್ಲವೇ ಸಂದರ್ಶಕ ವೀಸಾ ಮೂಲಕ ಜನರನ್ನು ಕಳುಹಿಸುವ  ಪ್ರಕರಣಳು ಮಿತಿ ಮೀರುತ್ತಿದೆ. ಈ ರೀತಿ ಯುಎಇ ಗೆ  ಅತ್ಯಧಿಕ ಸಂಖ್ಯೆಯಲ್ಲಿ ತಲುಪಿದವರು ಅಲ್ಲಿ ಕಾನೂನು ಕ್ರಮವನ್ನು ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ದುಬೈ ವಿಮಾನ ನಿಲ್ದಾಣದಲ್ಲಿ ವಿಸಾ ನೀಡುವ ಬರವಸೆ ನೀಡಿ ಸಂದರ್ಶಕ ವಿಸಾ ನೀಡಲಾಗುತ್ತದೆ ಎನ್ನಲಾಗಿದೆ. ಸೌದಿ ಅರೇಬಿಯಾದಲ್ಲಿ ಉಂಟಾದ ಸಂದಿಗ್ಧತೆಯ ಲಾಭ ಪಡೆದು ಈ ವಂಚನೆ ನಡೆಯುತ್ತಿದೆ.30 ಸಾವಿರದಿಂದ ಒಂದು ಲಕ್ಷದ ವರೆಗೆ ಪಾವತಿಸಿ, ಜನ ವಂಚನೆಗೆ ಮರುಳಾಗುತ್ತಿದ್ದಾರೆ.ಕೆಲಸದ ವಾಗ್ದಾನ ಮಾತ್ರ ನೀಡುವುದರಿಂದ ಕಾನೂನಾತ್ಮಕ ನಡೆ ಕೂಡ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಹೆಚ್ಚಾಗಿ ಕೇರಳದ ಹಲವು ಕಡೆಗಳಲ್ಲಿ ಜನಸಾಮಾನ್ಯರನ್ನು ವಂಚಿಸಲಾಗುತ್ತಿದೆ. ಹಾಗೆ ಸಂಧರ್ಶಕ ವಿಸಾದಲ್ಲಿ ಬಂದವರನ್ನು ಬರಮಾಡಿಕೊಳ್ಳಲು ಓರ್ವ ವ್ಯಕ್ತಿಯನ್ನು ಏಜನ್ಸಿಗಳು ವಿಮಾನ ನಿಲ್ದಾಣಕ್ಕೆ ಕಳುಹಿಸುತ್ತಾರೆ. ಒಂದು ದಿನ ಅವರ ಕೊಠಡಿಯಲ್ಲಿರಿಸಿ ಮರುದಿನ ಎಲ್ಲಾದರೂ ಕೆಲಸ ಹುಡುಕುವಂತೆ ಬಂದ ವ್ಯಕ್ತಿಗಳಿಗೆ ತಿಳಿಸಲಾಗುತ್ತದೆ.

ಸಂದರ್ಶನ ವಿಸಾಗಾಗಿ ನಿಮ್ಮಿಂದ ಹಣಪಡೆಯಲಾಗಿದ್ದು ಉಳಿದ ಖರ್ಚು ವೆಚ್ಚವನ್ನು ತಾವೇ ಭರಿಸುವಂತೆ ಹೇಳಲಾಗುತ್ತದೆ. ಕೈಯಲ್ಲಿ ಹಣವಿಲ್ಲದ ಕಾರಣ ಹೆಚ್ಚಿನವರಿಗೆ ಕಾಲಾವಧಿ ಮುಗಿಯುವ ವರೆಗೆ ಕಾಯುವಂತೆಯೂ ಇಲ್ಲ. ಈ ನಿಟ್ಟಿನಲ್ಲಿ ವಂಚನೆಗೊಳಗಾದ ಹಲವರನ್ನು ಸಾಮಾಜಿಕ ಸಂಘಟನೆಗಳು ಊರಿಗೆ ಮರಳಿಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಆರ್ಥಿಕ ಲಾಭಗಳಿಸುವ ಉದ್ದೇಶದಿಂದ ಈ ರಿತಿಯ ವಂಚನೆಗೆ ಏಜೆನ್ಸಿ ಗಳು ಮುಂದಾಗುತ್ತಿದ್ದು, ಎಗ್ರಿಮೆಂಟ್  ವಿಸಾ ಕಾಪಿ ಲಭಿಸದೆ ಈ ರೀತಿಯ ವಂಚನೆಯ ವಿಸಾಗೆ ಮಾರು ಹೋಗದಂತೆ ಅಲ್ಲಿನ ಅನಿವಾಸಿ ಭಾರತೀಯರು  ಎಚ್ಚರಿಕೆ ನೀಡಿದ್ದಾರೆ..

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!