ನ್ಯಾಯಾಂಗ ಬಿಕ್ಕಟ್ಟು: ಮಾಧ್ಯಮ ವರದಿ ವಿರುದ್ದ ನಿರ್ಬಂಧ ವಿಧಿಸಲು ಸುಪ್ರಿಂ ನಕಾರ

ಹೊಸದಿಲ್ಲಿ :-ಸುಪ್ರೀಂ ಕೋರ್ಟ್ ನ ನಾಲ್ವರು ಹಿರಿಯ ನ್ಯಾಯಾಧೀಶರಿಂದ ಪ್ರಸ್ತಾಪಿಸಲ್ಪಡುವ ವಿಷಯಗಳನ್ನು ವರದಿ ಮಾಡುವುದಕ್ಕೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಪುರಸ್ಕರಿಸಲು ಸರ್ವೋಚ್ಚ ನ್ಯಾಯಾಲಯ ಇಂದು ನಿರಾಕರಿಸಿದೆ.

ಜ.12ರಂದು ಸುದ್ದಿಗೋಷ್ಠಿಯಲ್ಲಿ ಸುಪ್ರೀಂ ಕೋರ್ಟ್‍ನ ನಾಲ್ವರು ಹಿರಿಯ ನ್ಯಾಯಾಧೀಶರಾದ ಜೆ.ಚಮಲೇಶ್ವರ್, ರಂಜನ್ ಗೊಗೈ, ಮದನ್ ಬಿ. ಲೋಕುರ್ ಮತ್ತು ಕುರಿಯನ್ ಜೋಸೆಫ್ ಅವರಿಂದ ಪ್ರಸ್ತಾಪಿಸಲ್ಪಡುವ ವಿಷಯಗಳನ್ನು ಪ್ರಕಟಿಸುವುದು, ಚರ್ಚಿಸುವುದು ಮತ್ತು ರಾಜಕೀಯಕರಣಗೊಳಿಸುವುದಕ್ಕೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕು ಹಾಗೂ ಸರ್ವೋಚ್ಚ ನ್ಯಾಯಾಲಯಕ್ಕೆ ಇದರಿಂದ ಮತ್ತಷ್ಟು ಹಾನಿಯಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಕೋರಿ ಮನವಿ ಸಲ್ಲಿಸಲಾಗಿತ್ತು.

ಈ ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು, ನ್ಯಾಯಾಲಯದ ರಿಜಿಸ್ಟ್ರಿ ಈ ಮನವಿಯನ್ನು ದಾಖಲೆಗೆ ಪರಿಗಣಿಸಿ ವಿಚಾರಣೆಗೆ ಪಟ್ಟಿ ಮಾಡಿದ ನಂತರವಷ್ಟೇ ತಾನು ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *

error: Content is protected !!