GST: ಜ.25 ರಿಂದ 29 ಸರಕುಗಳ ಮೇಲಿನ ತೆರಿಗೆ ಕಡಿತ

ಹೊಸದಿಲ್ಲಿ : ಆರು ತಿಂಗಳ ಹಿಂದೆ ದೇಶದಾದ್ಯಂತ ಜಾರಿಗೆ ಬಂದಿರುವ ಸಮಗ್ರ ಪರೋಕ್ಷ ತೆರಿಗೆ ವ್ಯವಸ್ಥೆಯಾಗಿರುವ ಸರಕು ಮತ್ತು ಸೇವಾ ತೆರಿಗೆಗಳಲ್ಲಿ ‘ಜಿಎಸ್‌ಟಿ ಮಂಡಳಿ’ಯು ಗುರುವಾರ ಅನೇಕ ಬದಲಾವಣೆಗಳನ್ನು ಮಾಡಿದೆ.

ವಿಠಾಯಿ, ಜೈವಿಕ ಡೀಸೆಲ್‌ ಒಳಗೊಂಡಂತೆ 29 ಸರಕುಗಳ ಮೇಲಿನ ತೆರಿಗೆ ಹೊರೆ ತಗ್ಗಿಸಲಾಗಿದೆ. ಜಾಬ್‌ ವರ್ಕ್ಸ್‌, ಟೇಲರಿಂಗ್‌ ಸೇವೆ, ಪಾರ್ಕ್‌ಗಳ ಪ್ರವೇಶ ಶುಲ್ಕ ಒಳಗೊಂಡಂತೆ 54 ಬಗೆಯ ಸೇವೆಗಳ ಮೇಲಿನ ತೆರಿಗೆ ದರ ಕಡಿಮೆ ಮಾಡಲಾಗಿದೆ.

ಜಿಎಸ್‌ಟಿ ರಿಟರ್ನ್‌ ಸಲ್ಲಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿ ಸಣ್ಣ ವರ್ತಕರ ಮೇಲಿನ ತೆರಿಗೆ ಪಾವತಿ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಭೆ ವಿವರವಾಗಿ ಚರ್ಚಿಸಿತು. ಹೊಸ ಪ್ರಕ್ರಿಯೆಯನ್ನು ಮಂಡಳಿಯ ಮುಂದಿನ ಸಭೆಯಲ್ಲಿ ಅಂತಿಮಗೊಳಿಸಲು ನಿರ್ಧರಿಸಲಾಗಿದೆ.

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿಯ 25ನೇ ಸಭೆಯಲ್ಲಿ 29 ಕೈ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೂನ್ಯಕ್ಕೆ ಇಳಿಸಲಾಗಿದೆ. ಕೆಲ ಕೃಷಿ ಉತ್ಪನ್ನಗಳೂ ಸೇರಿದಂತೆ 54 ಸೇವೆಗಳ ಮೇಲಿನ ತೆರಿಗೆ ಹೊರೆಯನ್ನೂ ತಗ್ಗಿಸಲಾಗಿದೆ. ಹೊಸ ದರಗಳು ಇದೇ 25 ರಿಂದ ಜಾರಿಗೆ ಬರಲಿವೆ.

Leave a Reply

Your email address will not be published. Required fields are marked *

error: Content is protected !!