ಏಪ್ರಿಲ್ 1ರಿಂದ ಟ್ಯಾಕ್ಸಿ ಮತ್ತು ಬಸ್ ಗಳಲ್ಲಿ GPS ಮತ್ತು ಪ್ಯಾನಿಕ್ ಬಟನ್ ಕಡ್ಡಾಯ

ನವದೆಹಲಿ: ಏಪ್ರಿಲ್ 1ರಿಂದ ಟ್ಯಾಕ್ಸಿ ಮತ್ತು ಬಸ್ ಗಳು ಸೇರಿದಂತೆ ಎಲ್ಲಾ ರೀತಿಯ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ(ಜಿಪಿಎಸ್) ಮತ್ತು ಪ್ಯಾನಿಕ್ ಬಟನ್(ತುರ್ತು ಕರೆಗುಂಡಿ) ಅನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಇಂದು ಟ್ವೀಟ್ ಮಾಡಿದ್ದಾರೆ.
ಆಟೋ ಹೊರತುಪಡಿಸಿ ಎಲ್ಲಾ ಟ್ಯಾಕ್ಸಿಗಳು, ಬಸ್ ಗಳು ಮತ್ತು ಸಾರ್ವಜನಿಕ ವಾಹನಗಳು ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಸಾರ್ವಜನಿಕ ವಾಹನಗಳಲ್ಲಿ ಅಪಾಯದ ಸಂದರ್ಭದಲ್ಲಿ ಉಪಯೋಗಕ್ಕೆ ಬರುವ ತುರ್ತು ಕರೆಗುಂಡಿ ಮತ್ತು ಜಿಪಿಎಸ್‌ ಸಾಧನಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂಬ ನಿಯಮವನ್ನು ಹಲವು ರಾಜ್ಯಗಳು ಪಾಲಿಸದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಗ ಏಪ್ರಿಲ್ 1 ಗಡುವು ನೀಡಿದೆ.
ನಿರ್ಭಯಾ ಪ್ರಕರಣದ ಬಳಿಕ ಮಹಿಳೆಯರ ಸುರಕ್ಷತೆಗಾಗಿ ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ತುರ್ತು ಕರೆಗುಂಡಿ (ಎಮರ್ಜೆನ್ಸಿ ಪ್ಯಾನಿಕ್‌ ಬಟನ್‌), ಸಿಸಿ ಕ್ಯಾಮೆರಾ ಮತ್ತು ಜಿಪಿಎಸ್‌ ಆಧರಿತ ವಾಹನದ ಜಾಡು ತಿಳಿಯುವ ಉಪಕರಣ ಅಳವಡಿಕೆಯನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ, ಈ ಎಲ್ಲಾ ಸಾಧನಗಳನ್ನು ಬಸ್‌ ನಿರ್ಮಾಣದ ಹಂತದಲ್ಲೇ ಅಳವಡಿಸಬೇಕು ಎಂದು ಈ ಹಿಂದೆ ನಿತಿನ್ ಗಡ್ಕರಿ ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!