
ವಿಟ್ಲ ಖಿದ್ಮತ್ ಪೌಂಡೇಶನ್ ವತಿಯಿಂದ ಕಂಬಳಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಮಧುಮೇಹ,ರಕ್ತದೊತ್ತಡ ಪರೀಕ್ಷೆಯನ್ನು ಸಾರ್ವಜನಿಕರಿಗಾಗಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಜಿ ಹಮೀದ್ ಕೊಡಂಗಾಯಿ ನಿರ್ವಹಿಸಿ, ಇಕ್ಕೊಯಿಝನ್ ಸಂಸ್ಥೆಯ ಮುಖ್ಯಸ್ಥ ರಾಜಾರಾಂ ಭಟ್ ಬಲಿಪಾಗುಳಿ ಕಾರ್ಯಕ್ರಮವನ್ನು ಉದ್ಥಾಟಿಸಿದರು. ಖಿದ್ಮತ್ ಫೌಂಡೇಶನ್ ನಡೆಸುತ್ತಿರುವ ಚಾರಿಟಿ ಕಾರ್ಯಕ್ರಮವು ಕಟ್ಟಕಡೆಯ ಬಡವರಿಗೆ ತಲುಪಲಿ, ಈ ನಿಟ್ಟಿನಲ್ಲಿ ವಿಟ್ಲ ಖಿದ್ಮತ್ ಪೌಂಡೇಶನ್ ಹಮ್ಮಿಕೊಂಡ ಕಣ್ಣಿನ ತಪಾಸಣ ಶಿಬಿರ ಹಾಗೂ ಚಾರಿಟಿ ಶ್ಲಾಘನೀಯ ಎಂದು ನುಡಿದರು.
ಕಂಬಳಬೆಟ್ಟು ಮುದರ್ರಿಸ್ ಇಬ್ರಾಹೀಂ ಮದನಿ ದುಆ ಆಶಿರ್ವಾದ ನೀಡಿದರು.
ಎಂ ಎಸ್ ಮಹಮ್ಮದ್,ಎಸ್ ಡಿ ಎಂ ಸಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಅಧ್ಯಕ್ಷರಾದ ಮುಹಮ್ಮದ್ ಶರೀಫ್ ಮದನಿ ಪೆರುವಾಯಿ, ಡಾ ಹುಸೈನ್, ಮೊಯ್ದೀನ್ ಹಾಜಿ, ಶರೀಫ್ ಉಕ್ಕುಡ, ಕಾಸಿಂ ಸಖಾಫಿ, ಅಬ್ದುರ್ರಹ್ಮಾನ್ ಸರಫಿ, ಉಮ್ಮರ್ ವಿಟ್ಲ, ಹಾರಿಸ್ ಒಕ್ಕೆತ್ತೂರು, ಖಾದರ್ ಖಲೀಫಾ, ಇಬ್ರಾಹಿಂ ಮುಸ್ಲಿಯಾರ್,SMA ವಿಟ್ಲ ರಿಜಿನಲ್ ಅಧ್ಯಕ್ಷರಾದ ಹಕ್ಕಿಂ, ಸತ್ತರ್ ಕಂಬಳಬೆಟ್ಟು, ಹಸೈನಾರ್ ನೆಲ್ಲಿಗುಡ್ಡೆ ಉಪಸ್ಥಿತರಿದ್ದರು. ಖಿದ್ಮತ್ ಕಾರ್ಯದರ್ಶಿ ಸಲೀಮ್ ಬೈರಿಕಟ್ಟೆ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.